ಮಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಇಂದು ಮಂಗಳೂರಿನ  ಹೆಸರುವಾಸಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ
ಹರಕೆ ಸಲ್ಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ವೇಳೆ ಪತಿ ರಾಜ್ ಕುಂದ್ರಾ, ಮಕ್ಕಳು, ಸಹೋದರಿ ನಟಿ ಶಮಿತಾ ಶೆಟ್ಟಿ, ಶಿಲ್ಪಾ ರವರ ತಾಯಿ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ.  ಬಾಲಿವುಡ್‌ ನಟಿ ಕರಾವಳಿ ಮೂಲದ ಕುಡ್ಲ ನಾಡಿನವರು ಎನ್ನುವುದು ಗೊತ್ತಿರುವ ವಿಷಯ. ಆಗಾಗ ಮಂಗಳೂರಿನ ಹೆಸರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾರೆ.


ಇದನ್ನೂ ಓದಿ: Agnisakshi Serial Actor: ಅಗ್ನಿಸಾಕ್ಷಿ' ಧಾರಾವಾಹಿ ನಟ ಸಂಪತ್ ಜಯರಾಮ್‌ ನೇಣಿಗೆ ಶರಣು


ಬಾಲಿವುಡ್‌ ನಟಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿ ಎಂದರೆ ಅಚ್ಚುಮೆಚ್ಚುಂತೆ.ತಮ್ಮ ಕೆಲಸ ಕಾರ್ಯಗಳಲ್ಲಿ ಬಿಡುವಾದಗಲೆಲ್ಲಾ ಕಟೀಲ್‌ ದೇವಾಸ್ಥಾನಕ್ಕೆ ಭೇಟಿ ನೀಡಿ ಆರ್ಶಿವಾದ ಪಡೆದುಕೊಳ್ಳುತ್ತಾರೆ. 


ಈ ಹಿಂದೆ ನಟಿಗೆ ಹೆಣ್ಣು ಮಗುವಿಲ್ಲ ಎಂಬ ಕಾರಣಕ್ಕೆ ಕಟೀಲು ದುರ್ಗೆಗೆ ಹರಕೆ ಹೊತ್ತಿದ್ದರು.  ಇದೀಗ ಆ ಇಷ್ಟಾರ್ಥ ನೆರವೇರಿದ್ದಕ್ಕೆ ಹರಕೆಯನ್ನು ತೀರಿಸಲು ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್‌ ಕುಂದ್ರಾ, ಶಮಿತಾ ಶೆಟ್ಟಿ ಒಟ್ಟಿಗೆ ಸಾಂಪ್ರದಾಯಿಕ ದಿರಿಸಿನಲ್ಲಿ ದೇವಸ್ಥಾನಕ್ಕೆ ಆಗಮಿಸಿ ಹಸಿರು ಸೀರೆ ನೀಡಿ ಹರಕೆ ತೀರಿಸಿದರು.


ಇದನ್ನೂ ಓದಿ: Bollywood Stars: ಸಿನಿಮಾಗೋಸ್ಕರ ಕಪ್ಪೆ ಫ್ರೈ ಮಾತ್ರವಲ್ಲದೇ ವಿಚಿತ್ರ ಆಹಾರ ಸೇವಿಸಿದ ಬಾಲಿವುಡ್‌ ತಾರೆಯರು - ಇವ್ರೇ ನೋಡಿ


ಶೆಟ್ಟಿ ಕುಟುಂಬದವರು ಕಟೀಲು ದೇವಿಗೆ ಸೀರೆಯನ್ನು‌ ಅರ್ಪಿಸಿ ಆರ್ಶಿವಾದ ಪಡೆದುಕೊಂಡರು. ಇದೇ ವೇಳೆ ದೇವಳದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇಗುಲದ ನಾಗಸ್ವರ ವಾದಕರಾದ ಲಿಂಗಪ್ಪ ರವರ ವಾದ್ಯವಾದನವನ್ನು ಆಲಿಸಿದರು.


ಬಳಿಕ  ಶಿಲ್ಪಾ ಶೆಟ್ಟಿ ಹಾಗೂ ಕುಟುಂಬದವರು ಕಟೀಲು ರಥಬೀದಿಯಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ಕೆಲಹೊತ್ತು ವೀಕ್ಷಿಸಿ ವೇಷಗಳ ಪೋಟೋ ತೆಗೆದು ಸಂಭ್ರಮಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.